2 ಅರಸುಗಳು 3 : 1 (KNV)
ಯೆಹೂದದ ಅರಸನಾದ ಯೆಹೋಷಾಫಾಟನ ಹದಿನೆಂಟನೆಯ ವರುಷದಲ್ಲಿ ಅಹಾಬನ ಮಗನಾದ ಯೋರಾಮನು ಸಮಾರ್ಯ ದಲ್ಲಿ ಇಸ್ರಾಯೇಲ್ಯರ ಅರಸನಾಗಿ ಹನ್ನೆರಡು ವರುಷ ಆಳಿದನು.
2 ಅರಸುಗಳು 3 : 2 (KNV)
ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನ್ನ ತಂದೆ ತಾಯಿಯ ಹಾಗೂ ಅಲ್ಲ; ತನ್ನ ತಂದೆಯು ಮಾಡಿಟ್ಟ ಬಾಳನ ಸ್ತಂಭವನ್ನು ತೆಗೆದುಹಾಕಿದನು.
2 ಅರಸುಗಳು 3 : 3 (KNV)
ಆದರೂ ಇಸ್ರಾಯೇಲ್ಯರನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಿಗೆ ಅವನು ಅಂಟಿಕೊಂಡು ಅವುಗಳನ್ನು ಬಿಡದೇ ಇದ್ದನು.
2 ಅರಸುಗಳು 3 : 4 (KNV)
ಮೋವಾಬಿನ ಅರಸನಾದ ಮೇಷನು ಕುರಿಮಂದೆ ಯುಳ್ಳವನಾಗಿದ್ದು ಇಸ್ರಾಯೇಲಿನ ಅರಸನಿಗೆ ಒಂದು ಲಕ್ಷ ಕುರಿಮರಿಗಳನ್ನೂ ಉಣ್ಣೆ ಸಹಿತವಾಗಿ ಒಂದು ಲಕ್ಷ ಟಗರುಗಳನ್ನೂ ಕಪ್ಪವಾಗಿ ಕೊಡುತ್ತಿದ್ದನು.
2 ಅರಸುಗಳು 3 : 5 (KNV)
ಅಹಾ ಬನು ಸತ್ತ ತರುವಾಯ ಏನಾಯಿತಂದರೆ, ಮೋವಾ ಬಿನ ಅರಸನು ಇಸ್ರಾಯೇಲಿನ ಅರಸನಿಗೆ ವಿರೋಧ ವಾಗಿ ತಿರುಗಿಬಿದ್ದನು.
2 ಅರಸುಗಳು 3 : 6 (KNV)
ಆ ದಿನದಲ್ಲಿ ಯೋರಾಮನು ಸಮಾರ್ಯದಿಂದ ಹೊರಟು ಹೋಗಿ ಇಸ್ರಾಯೇಲ್ಯರನ್ನು ಲೆಕ್ಕಿಸಿದನು.
2 ಅರಸುಗಳು 3 : 7 (KNV)
ಇದಲ್ಲದೆ ಅವನು ಹೋಗಿಮೋವಾಬಿನ ಅರಸನು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದಾನೆ; ನೀನು ನನ್ನ ಸಂಗಡ ಮೋವಾಬಿನ ಮೇಲೆ ಯುದ್ಧಮಾಡಲು ಬರುವಿಯೋ ಎಂದು ಯೆಹೂದದ ಅರಸನಾದ ಯೆಹೋಷಾಫಾಟನಿಗೆ ಹೇಳಿ ಕಳುಹಿಸಿ ದನು. ಅದಕ್ಕವನು--ನಾನು ಬರುವೆನು; ನಾನು ನಿನ್ನ ವನೇ, ನನ್ನ ಜನರು ನಿನ್ನ ಜನರೇ, ಹಾಗೆಯೇ ನನ್ನ ಕುದುರೆಗಳು ನಿನ್ನ ಕುದುರೆಗಳಂತೆಯೇ ಅಂದನು.
2 ಅರಸುಗಳು 3 : 8 (KNV)
ಅದಕ್ಕೆ ಯಾವ ಮಾರ್ಗವಾಗಿ ಹೋಗೋಣ ಎಂದು ಇವನು ಕೇಳಿದಾಗ ಅವನು--ಎದೋಮಿನ ಅರಣ್ಯ ಮಾರ್ಗವಾಗಿ ಅಂದನು.
2 ಅರಸುಗಳು 3 : 9 (KNV)
ಹೀಗೆಯೇ ಇಸ್ರಾಯೇಲಿನ ಅರಸನೂ ಯೆಹೂದದ ಅರಸನೂ ಎದೋಮಿನ ಅರಸನೂ ಹೊರಟು ಸುತ್ತಾದ ಮಾರ್ಗದಲ್ಲಿ ಏಳು ದಿವಸ ನಡೆದರು. ಆದರೆ ಸೈನ್ಯಕ್ಕೂ ಅವರ ಹಿಂದೆ ಬಂದ ಪಶುಗಳಿಗೂ ನೀರು ಇಲ್ಲದೆ ಹೋಯಿತು.
2 ಅರಸುಗಳು 3 : 10 (KNV)
ಆಗ ಇಸ್ರಾಯೇಲಿನ ಅರಸನು -- ಅಯ್ಯೋ, ಕರ್ತನು ಈ ಮೂರು ಮಂದಿ ಅರಸುಗಳನ್ನು ಮೋವಾ ಬ್ಯರ ಕೈಯಲ್ಲಿ ಒಪ್ಪಿಸಿಕೊಡಲು ಕರೆದಿದ್ದಾನಲ್ಲಾ ಅಂದನು.
2 ಅರಸುಗಳು 3 : 11 (KNV)
ಆದರೆ ಯೆಹೋಷಾಫಾಟನು -- ಪ್ರವಾದಿಯ ಮೂಲಕವಾಗಿ ಕರ್ತನನ್ನು ಕೇಳುವ ಹಾಗೆ ಇಲ್ಲಿ ಕರ್ತನ ಪ್ರವಾದಿಯು ಯಾವನೂ ಇಲ್ಲವೋ ಅಂದನು. ಆಗ ಇಸ್ರಾಯೇಲ್ಯರ ಅರಸನ ಸೇವಕರಲ್ಲಿ ಒಬ್ಬನು ಪ್ರತ್ಯು ತ್ತರವಾಗಿ--ಎಲೀಯನ ಕೈಗಳ ಮೇಲೆ ನೀರು ಹೊಯಿದ ಶಾಫಾಟನ ಮಗನಾದ ಎಲೀಷನು ಇಲ್ಲಿದ್ದಾನೆಂದು ಹೇಳಿದನು. ಆಗ ಯೆಹೋಷಾಫಾಟನು--ಅವನ ಬಳಿ ಯಲ್ಲಿ ಕರ್ತನ ವಾಕ್ಯ ಉಂಟು ಅಂದನು.
2 ಅರಸುಗಳು 3 : 12 (KNV)
ಇಸ್ರಾಯೇ ಲಿನ ಅರಸನೂ ಯೆಹೋಷಾಫಾಟನೂ ಎದೋಮಿನ ಅರಸನೂ ಅವನ ಬಳಿಗೆ ಇಳಿದು ಹೋದರು.
2 ಅರಸುಗಳು 3 : 13 (KNV)
ಎಲೀ ಷನು ಇಸ್ರಾಯೇಲಿನ ಅರಸನಿಗೆ -- ನಿನ್ನೊಂದಿಗೆ ನಾನೇನು ಮಾಡಬೇಕು? ನೀನು ನಿನ್ನ ತಂದೆ ತಾಯಿಯ ಪ್ರವಾದಿಗಳ ಬಳಿಗೆ ಹೋಗು ಅಂದನು. ಇಸ್ರಾಯೇ ಲಿನ ಅರಸನು ಅವನಿಗೆ--ಇಲ್ಲ, ಕರ್ತನು ಈ ಮೂರು ಮಂದಿ ಅರಸರುಗಳನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿ ಕೊಡುವದಕ್ಕೆ ಒಟ್ಟಾಗಿ ಕರೆದಿದ್ದಾನಲ್ಲಾ ಅಂದನು.
2 ಅರಸುಗಳು 3 : 14 (KNV)
ಆಗ ಎಲೀಷನು--ನಾನು ಯಾವಾತನ ಸಮ್ಮುಖ ದಲ್ಲಿ ನಿಂತಿರುತ್ತೇನೋ ಆ ಸೈನ್ಯಗಳ ಕರ್ತನ ಜೀವದಾಣೆ, ನಿಶ್ಚಯವಾಗಿ ಯೆಹೂದದ ಅರಸನಾದ ಯೆಹೋಷಾ ಫಾಟನ ಸಮ್ಮುಖವನ್ನು ನಾನು ಗೌರವಿಸದಿದ್ದರೆ ನಾನು ನಿನ್ನ ಕಡೆ ಕಣ್ಣಿಡುವದಿಲ್ಲ, ನೋಡುವದೂ ಇಲ್ಲ.
2 ಅರಸುಗಳು 3 : 15 (KNV)
ಆದರೆ ಈಗ ವಾದ್ಯ ಬಾರಿಸುವವನನ್ನು ನನ್ನ ಬಳಿಗೆ ಕರಕೊಂಡು ಬಾ ಅಂದನು. ಆಗ ವಾದ್ಯ ಬಾರಿಸುವ ವನು ಬಾರಿಸಿದಾಗ ಕರ್ತನ ಕೈ ಅವನ ಮೇಲೆ ಬಂತು.
2 ಅರಸುಗಳು 3 : 16 (KNV)
ಅವನು ಹೇಳಿದ್ದೇನಂದರೆ -- ಈ ತಗ್ಗನ್ನು ಹಳ್ಳ ಕೊಳ್ಳಗಳಾಗಿ ಮಾಡಿರೆಂದು ಕರ್ತನು ಹೇಳುತ್ತಾನೆ.
2 ಅರಸುಗಳು 3 : 17 (KNV)
ಕರ್ತನು ಹೀಗೆ ಹೇಳುತ್ತಾನೆ--ನೀನು ಗಾಳಿಯನ್ನೂ ಮಳೆಯನ್ನೂ ನೋಡುವದಿಲ್ಲ; ಆದರೆ ನೀವು ನಿಮ್ಮ ದನಗಳೂ ನಿಮ್ಮ ಪಶುಗಳೂ ಕುಡಿಯುವ ಹಾಗೆ ಈ ತಗ್ಗು ನೀರಿನಿಂದ ತುಂಬಲ್ಪಡುವದು.
2 ಅರಸುಗಳು 3 : 18 (KNV)
ಇದಲ್ಲದೆ ಇದು ಕರ್ತನ ದೃಷ್ಟಿಗೆ ಅಲ್ಪವಾಗಿರುವದು; ಆತನು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿ ಕೊಡುವನು.
2 ಅರಸುಗಳು 3 : 19 (KNV)
ನೀವು ಕೋಟೆಯುಳ್ಳ ಎಲ್ಲಾ ಪಟ್ಟಣಗಳನ್ನೂ ಆದು ಕೊಳ್ಳತಕ್ಕ ಎಲ್ಲಾ ಪಟ್ಟಣಗಳನ್ನೂ ಹೊಡೆದು ಬಿಟ್ಟು ಉತ್ತಮವಾದ ಎಲ್ಲಾ ಮರಗಳನ್ನು ಬೀಳಮಾಡಿ ನೀರು ಬಾವಿಗಳನ್ನೆಲ್ಲಾ ಮುಚ್ಚಿ ಉತ್ತಮವಾದ ಭೂಮಿಯಲ್ಲಿ ರುವ ಹೊಲಗಳನ್ನೆಲ್ಲಾ ಕಲ್ಲುಗಳಿಂದ ತುಂಬಿಸಿ ಕೆಡಿಸ ಬೇಕು ಅಂದನು.
2 ಅರಸುಗಳು 3 : 20 (KNV)
ಉದಯದಲ್ಲಿ ಕಾಣಿಕೆಯನ್ನು ಅರ್ಪಿಸುತ್ತಿರುವಾಗ ಏನಾಯಿತಂದರೆ, ಇಗೋ, ನೀರು ಎದೋಮಿನ ಮಾರ್ಗವಾಗಿ ಬಂದದರಿಂದ ದೇಶವು ನೀರಿನಿಂದ ತುಂಬಲ್ಪಟ್ಟಿತು.
2 ಅರಸುಗಳು 3 : 21 (KNV)
ಅರಸುಗಳು ತಮ್ಮ ಸಂಗಡ ಯುದ್ಧಮಾಡುವದಕ್ಕೆ ಬಂದಿದ್ದಾರೆಂದು ಮೋವಾಬ್ಯರು ಕೇಳಿದಾಗ ಅವರು ಆಯುಧ ಧರಿಸತಕ್ಕ ಯೌವನಸ್ಥರು ಮೊದಲುಗೊಂಡು ಎಲ್ಲರನ್ನು ಕೂಡಿಸಿಕೊಂಡು ಮೇರೆಯಲ್ಲಿ ನಿಂತರು.
2 ಅರಸುಗಳು 3 : 22 (KNV)
ಮೋವಾಬ್ಯರು ಉದಯಕಾಲದಲ್ಲಿ ಎದ್ದು ಆ ನೀರಿನ ಮೇಲೆ ಸೂರ್ಯನ ಪ್ರಕಾಶ ಬಿದ್ದದ್ದರಿಂದ ಆ ನೀರು ರಕ್ತದ ಹಾಗೆ ಕೆಂಪಾಗಿರುವದನ್ನು ಕಂಡರು.
2 ಅರಸುಗಳು 3 : 23 (KNV)
ಆಗ ಅವರು--ಇದು ರಕ್ತವೇ; ಆ ಅರಸುಗಳು ತಮ್ಮ ತಮ್ಮೊ ಳಗೆ ಜಗಳವಾಡಿ ಒಬ್ಬರನ್ನೊಬ್ಬರು ಕೊಂದಿದ್ದಾರೆ; ಈಗ ಮೋವಾಬ್ಯರೇ, ಕೊಳ್ಳೆಗೆ ಬನ್ನಿರಿ ಎಂದು ಹೇಳಿ ಕೊಂಡರು.
2 ಅರಸುಗಳು 3 : 24 (KNV)
ಅವರು ಇಸ್ರಾಯೇಲಿನ ದಂಡಿಗೆ ಬಂದಾಗ ಇಸ್ರಾಯೇಲ್ಯರು ಎದ್ದು ಮೋವಾಬ್ಯರು ತಮ್ಮ ಮುಂದೆ ಓಡಿಹೋಗುವ ಹಾಗೆ ಅವರನ್ನು ಹೊಡೆದು ಮೋವಾಬ್ಯರನ್ನು ಅವರ ದೇಶದ ವರೆಗೂ ಹೊಡೆಯುತ್ತಾ ಬಂದರು.
2 ಅರಸುಗಳು 3 : 25 (KNV)
ಇದಲ್ಲದೆ ಅವರು ಪಟ್ಟಣ ಗಳನ್ನು ಕೆಡವಿಹಾಕಿ ಉತ್ತಮವಾದ ಹೊಲಗಳ ಮೇಲೆ ಕಲ್ಲನ್ನು ಹಾಕಿ ತುಂಬಿಸಿ ನೀರು ಬಾವಿಗಳನ್ನೆಲ್ಲಾ ಮುಚ್ಚಿ, ಎಲ್ಲಾ ಉತ್ತಮವಾದ ಮರಗಳನ್ನು ಬೀಳಮಾಡಿದರು. ಕೀರ್ಹರೆಷೆತಿನಲ್ಲಿ ಮಾತ್ರ ಅದರ ಕಲ್ಲುಗಳನ್ನು ಉಳಿಸಿ ಬಿಟ್ಟರು. ಆದರೆ ಕಲ್ಲೆಸೆಯುವವರು ಅದನ್ನೂ ಸುತ್ತಿ ಕೊಂಡು ಹೊಡೆದುಬಿಟ್ಟರು.
2 ಅರಸುಗಳು 3 : 26 (KNV)
ಯುದ್ಧವು ತನಗೆ ಅತಿ ಕಷ್ಟವಾಯಿತೆಂದು ಮೋವಾಬಿನ ಅರಸನು ಕಂಡಾಗ ಎದೋಮಿನ ಅರಸನ ಮೇಲೆ ಹೋಗಿ ಬೀಳುವ ನಿಮಿತ್ತ ಕತ್ತಿ ಹಿಡಿಯುವ ಏಳುನೂರು ಮಂದಿ ಯನ್ನು ತನ್ನ ಸಂಗಡ ತೆಗೆದುಕೊಂಡನು; ಆದರೆ ಅದು ಅವರಿಂದ ಆಗದೆ ಹೋಯಿತು.ಆಗ ಅವನು ತನಗೆ ಬದಲಾಗಿ ಆಳುವದಕ್ಕಿರುವ ತನ್ನ ಹಿರಿಯ ಮಗನನ್ನು ತಕ್ಕೊಂಡು ಅವನನ್ನು ಗೋಡೆಯ ಮೇಲೆ ದಹನ ಬಲಿಯಾಗಿ ಅರ್ಪಿಸಿದನು; ಇದರಿಂದ ಇಸ್ರಾ ಯೇಲ್ಯರ ಮೇಲೆ ಅವರಿಗೆ ಬಹು ರೌದ್ರ ಉಂಟಾದ ದರಿಂದ ಅವರು ಅವನನ್ನು ಬಿಟ್ಟು ತಮ್ಮ ದೇಶಕ್ಕೆ ಹಿಂತಿರುಗಿ ಹೋದರು.
2 ಅರಸುಗಳು 3 : 27 (KNV)
ಆಗ ಅವನು ತನಗೆ ಬದಲಾಗಿ ಆಳುವದಕ್ಕಿರುವ ತನ್ನ ಹಿರಿಯ ಮಗನನ್ನು ತಕ್ಕೊಂಡು ಅವನನ್ನು ಗೋಡೆಯ ಮೇಲೆ ದಹನ ಬಲಿಯಾಗಿ ಅರ್ಪಿಸಿದನು; ಇದರಿಂದ ಇಸ್ರಾ ಯೇಲ್ಯರ ಮೇಲೆ ಅವರಿಗೆ ಬಹು ರೌದ್ರ ಉಂಟಾದ ದರಿಂದ ಅವರು ಅವನನ್ನು ಬಿಟ್ಟು ತಮ್ಮ ದೇಶಕ್ಕೆ ಹಿಂತಿರುಗಿ ಹೋದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27

BG:

Opacity:

Color:


Size:


Font: